navbar

Drop Down MenusCSS Drop Down MenuPure CSS Dropdown Menu
ಶುಭನುಡಿ ಮುನ್ನುಡಿ


ಕಿರಿದರೊಳೆ ಹಿರಿದನ್ನು ಹೇಳುವ ಚುಟುಕು ಮುಖ್ಯವಾಹಿನಿಯಿಂದ ದೂರ ಸರಿಯುತ್ತಿದೆ ಎನ್ನುವ ಕೊರಗಿನ ನಡುವೆಯೇ ಅಲ್ಲೊಂದು ಇಲ್ಲೊಂದು ಚುಟುಕು ಕವಿತೆಗಳು ನಕ್ಷತ್ರದಂತೆ ಚಕ್ಕನೆ ಹೊಳೆದು ಸಾಹಿತ್ಯ ಸರಸ್ವತಿಯ ಕಿರೀಟದಲ್ಲಿ ಮಿಂಚುತ್ತಿದೆ. ಅಂತಹ ಕವಿತೆಗಳ ಕವಿಗಳಲ್ಲಿ 'ಕೆವೀಟೀ ಮೇಗುರು' ಎಂಬ ಹೆಸರಿನಲ್ಲಿ ಚುಟುಕು ರಚನೆಯಲ್ಲಿ ತೊಡಗಿರುವ ಕವಿತಾ ಒಬ್ಬರು. "ಹನಿಮುತ್ತಿನ ಹಾರ" ವೆಂದು ಹೆಸರಿರುವ ಈ ಬರಹದಲ್ಲಿ ಒಂದೊಂದು ಮುತ್ತುಗಳನ್ನು ತಂದು ಪೋಣಿಸಿದ್ದಾರೆ! ಹಲವು ತಪಸ್ಸುಗಳ ಫಲವಾದರೂ ಇದರಲ್ಲಿ ಒಂದು ಹದವಿದೆ, ಭಂದುತ್ವವಿದೆ.ಸಮಾಜವನ್ನು ವಿಮರ್ಶಾ ದೃಷ್ಠಿಯಿಂದ ನೋಡುವ ಚತುರತೆ ಇದೆ. ಸೃಜನಶೀಲತೆಯ ನೆಲೆಯಲ್ಲೀ ರಚನೆಗೊಂಡ ಚುಟುಕಗಳು ಒಂದಲ್ಲ ಒಂದು ಸಮಸ್ಯಾ ರೋಗಕ್ಕೆ ಮಾತ್ರೆಯಂತಿದೆ. "ಅಂತರಂಗದಿಂದ ಹುಟ್ಟುವ ಕವಿ ಮನಸ್ಸು ಸಮಾಜ ಮುಖಿಯಾಗುತ್ತವದೆ" ಎನ್ನುವಂತೆ ಇಲ್ಲಿನ ಚುಟುಕು ವ್ಯರ್ಥವಾಗಿಲ್ಲ. ಭಾವತಿವ್ರತೆಯ ಗೊಂದಲದಲ್ಲಿ ಸಿಕ್ಕಿಬಿಳದೆ,ಓದುಗರ ಮಸಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗುತ್ತದೆ
ಬೆಟ್ಟದ ಮೇಲೊಂದು
ಮನೆಯಮಾಡಿದ್ದಳಾ
ಉಡುತಡಿಯ ಅಕ್ಕ
ಮನದ ಶಿರವ ಕತ್ತರಿಸಿ
ಬಟ್ಟ ಬಯಲಲಿ ಮೆರೆದು,
ಮುರಿದಳು ಮೃಗಗಳ ಸೊಕ್ಕ
ಎಂಬ ಚುಟುಕಗಳು ಆದ್ಯಾತ್ಮಿಕ ನೆಲೆಯಲ್ಲಿಯೂ ಸೈ ಎನ್ನಿಸಿಕೊಳ್ಳುತ್ತದೆ. ಚುಟುಗಳ ಭಾವನೆಗಳ ಅನುಗುಣವಾಗಿ ಪರಿವಿಡಿಯಲ್ಲಿಯೇ ಕವಿ ತಮ್ಮ ಕವನಗಳನ್ನು ವಿಂಗಡಿಸಿದ್ದಾರೆ
"ಮೊದಲ ನಮನ"ವೆಂಬ ವಿಭಾಗದಲ್ಲಿ ಕವಿಯ ಮನಸ್ಸು ಹಿರಿಯ ಚೇತನಗಳನ್ನು ನೋಡಿದ ರೀತಿ ಬೆರಗು ಹುಟ್ಟಿಸುತ್ತದೆ. ಅಂಬೇಡ್ಕರ್ ರವರ ಬಗ್ಗೆ ಬರೆಯುತ್ತಾ-
ಸಾಗಿತ್ತು ಮುಗುದನ
ಮೇಲೆ
ಮೌಢ್ಯಗಳ ಸವಾರಿ
ಬೇವ ನುಂಗಿದರೂ
ಮಾವನೀಡುತ ಬೆಳೆದ
ಸಂವಿಧಾನದ ರೂವಾರಿ
ಎಂಬುದು ವಿಶೇಶ ಎನ್ನಿಸುತ್ತದೆ.
ಹಾಗೆಯೇ ಏಸುವಿನ ಬಗೆಗೆ ಬರಿಯುತ್ತಾ-
ಪ್ರಭು ಏಸುವಿನ
ಪಾದಗಳಿಗೆ ಬಿದ್ದ
ಕ್ರೌರ್ಯದ ಮೊಳೆ,
ತಡೆಯಲಾರದವರ
ಎದೆಯಿಂದ ಹರಿದ
ಶಾಂತಿ-ಸಹನೆಯ ಹೊಳೆ.
ಎಂದು ಸಹಜ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾರೆ. ಹಾಗೆಯೇ ಎಲ್ಲಾ ಚುಟುಕಗಳು ಅನಾವರ್ಣ ಗೊಳ್ಳುತ್ತದೆ.

ಕವಿಯ ಆಳನೋಟ ಅವರನ್ನು ಸಮಾಜದಲ್ಲಿ ಕಂಡ ಸತ್ಯವೆಂಬ ವೆಂಗ್ಯವನ್ನು ಹಾಸ್ಯದ ಲೇಪನೆ ಹಚ್ಚಿ ಸುತ್ತಿಗೆಯಿಂದ ಗುದ್ದಿದಂತಿದೆ ಅದನ್ನವರು "ಸುದ್ದಿಗೆ ಗುದ್ದು" ಎಂದು ವಿಂಗಡಸಿ ಹೆಣದಿದ್ದಾರೆ.
ಹೊರಗಿನ ದುಷ್ಟರ
ತಡಿಯಲಿದೆ, ಗಡಿಯಲ್ಲಿ
ಯೋಧರ ಸರ್ಪಗಾವಲು,
ಬಳಭಾಗವಾಗಿದೆ
ಭ್ರಷ್ಟರು ನಿರ್ಭೀತಿಯಲಿ
ಮೇಯುವ ಹುಲ್ಲುಗಾವಲು
ಎಂಬುದು ಸಾಮಾಜಿಕ ಪ್ರಜ್ಞೆಯ ಅರಿವನ್ನು ಹೆಚ್ಚಿಸುವಷ್ಟು ತೀಕ್ಷಣವಾಗಿದೆ.
ಹೀಗೆ ಅಪರೂಪ ಎನಿಸುವ ಜೀವ ವಿಮಾ ನಿಗಮದ ಉದ್ಯೋಗಿ. ಸಂಖೆಗಾಗಿ ರಚಿಸದೇ, ಮನಸ್ಸಿನ ಉದ್ಧಿಪನೆಯಿಂದ ಬರೆದ ಪ್ರತಿಯೊಂದು ಭರಹವು ಹದವಾಗಿ ಬೆರೆಸಿದ ಪಾಕದ ಉಂಡೆಯಂತಿದೆ. ಸಾರಸ್ವತ ಲೋಕಕ್ಕೆ ದಾಕ್ಷಿಣ್ಯದಿಂದ ತಡವಾಗಿ ಬಂದಿದ್ದರು ಮುಂದೆ ಪ್ರಬುದ್ದ ಕವಿಯಾಗುವ ಲಕ್ಷಣ ಕವಿತಾ ಅವರಿಗಿದೆ. ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಅಲ್ಲೇ ಚುಟುಕ ಕಟ್ಟಿ, ಸಮಾಜಮುಖಿಯಾಗಿರುವ ಕವಿತ ಸಾಹಿತ್ಯ ಲೋಕಕ್ಕೆ ಒಂದು ಅಮೃತಬಳ್ಳಿಯಾಗಬಲ್ಲರು, ಅವರಿಗೆ ಶುಭಾಷಯ ಕೋರುತ್ತೇನೆ.
- ಸುರೇಂದ್ರ ಶೆಟ್ಟಿ ತೆಕ್ಕಟ




ಪರಿವಿಡಿ